ಮೈಲಾರಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಮಂಜುನಾಥ ಬಾಬು(ಅಮೃತಹಳ್ಳಿ) ನಿರ್ಮಿಸುತ್ತಿರುವ ‘ಬ್ರಹ್ಮ ಚಿತ್ರಕ್ಕೆ
ಮಾತಿನ ಭಾಗದ(ಟಾಕಿ) ಚಿತ್ರೀಕರಣ ಮುಕ್ತಾಯವಾಗಿದೆ. ಎರಡು ಹಾಡು ಹಾಗೂ ಸಾಹಸ ಸನ್ನಿವೇಶವೊಂದರ ಚಿತ್ರೀಕರಣ ಮಾತ್ರ ಬಾಕಿಯಿದೆ.
ಆರ್.ಚಂದ್ರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಉಪೇಂದ್ರ ಅಭಿನಯಿಸುತ್ತಿದ್ದಾರೆ. ಪ್ರಣೀತಾ, ರಂಗಾಯಣರಘು, ಸಾಧುಕೋಕಿಲ, ಶಯ್ಯಾಜಿ ಶಿಂಧೆ, ನಾಜರ್, ರಾಹುಲ್ದೇವ್, ಸೋನು ಸೂಧ್,
ಸುಭಾಷ್ ಶೆಟ್ಟಿ, ಗಿರೀಶ್ ಕಾರ್ನಾಡ್, ಕಾಟ್ ರಾಜು, ಬುಲೆಟ್ ಪ್ರಕಾಶ್, ಜಾನ್ ಕೊಕೇನ್, ಮಂಗಳೂರು ಸುರೇಶ್, ಲಕ್ಷ್ಮಣ್,
ಶರಣ್, ಪದ್ಮಜಾರಾವ್, ಸುಚೇಂದ್ರಪ್ರಸಾದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಶೇಖರ್ ಚಂದ್ರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡುತ್ತಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಶಿವಕುಮಾರ್, ಇಸ್ಮಾಯಿಲ್ ಕಲಾ ನಿರ್ದೇಶನ, ಥ್ರಿಲ್ಲರ್ ಮಂಜು, ವಿಜಯ್ ಸಾಹಸ ನಿರ್ದೇಶನ ಹಾಗೂ ಪ್ರದೀಪ್ ಆಂಟೋನಿ ಅವರ ನೃತ್ಯ ನಿರ್ದೇಶನ ‘ಬ್ರಹ್ಮ ಚಿತ್ರಕ್ಕಿದೆ.